ಟಿ. ಜಿ. ಶ್ರೀನಿಧಿ
ಉತ್ತರಾಖಂಡದ ಪ್ರವಾಹ ಅಕ್ಷರಶಃ ಕಣ್ಣೀರಿನ ಪ್ರವಾಹವೇ ಆಗಿಬಿಟ್ಟಿದೆ. ವರ್ಷಗಳಿಂದ ನಡೆದ ವ್ಯವಸ್ಥಿತ ಪರಿಸರನಾಶ ದೊಡ್ಡ ಕಾರಣವೋ, ಪರಿಹಾರ ಕಾರ್ಯದಲ್ಲಿ ಸರಕಾರ ತೋರಿದ ಬೇಜವಾಬ್ದಾರಿತನ ದೊಡ್ಡ ಕಾರಣವೋ ಎಂದು ಯೋಚಿಸಲೂ ಆಗದಷ್ಟು ಪ್ರಮಾಣದ ಹಾನಿ ಇಡೀ ದೇಶವನ್ನೇ ಗಾಬರಿಗೊಳಿಸಿದೆ. ನಮ್ಮ ಸೇನಾಪಡೆಗಳು ತಮ್ಮ ಎಂದಿನ ಸಮರ್ಪಣಾಭಾವದೊಡನೆ ಮಾಡುತ್ತಿರುವ ಕೆಲಸವೊಂದೇ ಈ ಸನ್ನಿವೇಶದ ಏಕೈಕ ಆಶಾಕಿರಣ ಎನ್ನಬಹುದೇನೋ.
ಇಂತಹ ಸನ್ನಿವೇಶದಲ್ಲಿ ಉತ್ತರಾಖಂಡದಿಂದ ನೂರಾರು ಮೈಲಿ ದೂರವಿರುವ ನಮ್ಮನಿಮ್ಮಂಥವರು ಹೇಗೆ ನೆರವಾಗಬಹುದು ಎನ್ನುವುದು ದೊಡ್ಡ ಪ್ರಶ್ನೆ. ತೊಂದರೆಯಲ್ಲಿ ಸಿಲುಕಿರುವವರು ಆದಷ್ಟೂ ಬೇಗ ಪಾರಾಗಿ ಬರಲಿ ಎನ್ನುವ ಹಾರೈಕೆಯೇನೋ ಸರಿ, ಆದರೆ ಅಲ್ಲಿನ ಪರಿಸ್ಥಿತಿ ಸುಧಾರಿಸಲು ಅಷ್ಟೇ ಸಾಕಾಗುವುದಿಲ್ಲವಲ್ಲ!
ಈ ನಿಟ್ಟಿನಲ್ಲಿ ಇಂಟರ್‌ನೆಟ್ ಲೋಕ ತನ್ನ ಕೈಲಾದಷ್ಟು ಮಟ್ಟದ ನೆರವು ನೀಡಲು ಹೊರಟಿರುವುದು ವಿಶೇಷ.