ಬುಧವಾರ, ಸೆಪ್ಟೆಂಬರ್ 2, 2009

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ

ಎರಡನೇ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಇದೇ ತಿಂಗಳಿನ ೨೩ ಹಾಗೂ ೨೪ರಂದು ಗುಲಬರ್ಗಾದಲ್ಲಿ ನಡೆಯಲಿದೆ. ಸೆಪ್ಟೆಂಬರ್ ೨೩ರ ಬೆಳಿಗ್ಗೆ ೧೧ ಗಂಟೆಗೆ ಮುಖ್ಯಮಂತ್ರಿಗಳು ಸಮ್ಮೇಳನ ಉದ್ಘಾಟಿಸಲಿದ್ದಾರೆ.

'ಮನುಕುಲದ ಒಳಿತಿಗಾಗಿ ವಿಜ್ಞಾನ-ತಂತ್ರಜ್ಞಾನ' ಈ ಸಮ್ಮೇಳನದ ಪ್ರಮುಖ ವಿಷಯ. ಎರಡು ದಿನಗಳ ಅವಧಿಯಲ್ಲಿ ಈ ವಿಷಯದ ವಿವಿಧ ಆಯಾಮಗಳಿಗೆ ಸಂಬಂಧಿಸಿದ ಅನೇಕ ವಿಚಾರಸಂಕಿರಣಗಳು ನಡೆಯಲಿವೆ. ಪ್ರೊ ಯು ಆರ್ ರಾವ್, ಪ್ರೊ ಪಿ ಬಲರಾಂ, ಪ್ರೊ ಎಂ ಐ ಸವದತ್ತಿ, ಪ್ರೊ ರೊದ್ದಂ ನರಸಿಂಹ, ಡಾ ವಿ ಪ್ರಕಾಶ್, ಡಾ ಪಿ ಎಸ್ ಶಂಕರ್, ಶ್ರೀ ನಾಗೇಶ ಹೆಗಡೆ - ಇವರು ಭಾಷಣಕಾರರಲ್ಲಿ ಪ್ರಮುಖರು.

ಸಮ್ಮೇಳನದ ಸಂದರ್ಭದಲ್ಲಿ ವಸ್ತುಪ್ರದರ್ಶನ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ 'ವಿಜ್ಞಾನ ಲೋಕ' ಪತ್ರಿಕೆಯ ವಿಶೇಷ ಸಂಚಿಕೆಯನ್ನೂ ಹೊರತರಲಾಗುವುದು.

ಸಮ್ಮೇಳನದಲ್ಲಿ ಭಾಗವಹಿಸಲು ಯಾವುದೇ ನೋಂದಣಿ ಶುಲ್ಕ ಇಲ್ಲ. ಹೆಚ್ಚಿನ ವಿವರಗಳಿಗೆ ಸಮ್ಮೇಳನದ ಸಂಘಟನಾ ಕಾರ್ಯದರ್ಶಿಯವರನ್ನು gugksta09@rediffmail.com ವಿಳಾಸದಲ್ಲಿ ಸಂಪರ್ಕಿಸಬಹುದು.

2 ಕಾಮೆಂಟ್‌ಗಳು:

Chamaraj Savadi ಹೇಳಿದರು...

ವಿಜ್ಞಾನ ಮತ್ತು ತಂತ್ರಜ್ಞಾನ ವಿಧಾನಸೌಧವನ್ನೂ ಪ್ರವೇಶಿಸುವಂತಾದರೆ, ಅದಕ್ಕಿಂತ ಮಹತ್ವದ ಕೊಡುಗೆ ಇನ್ನೊಂದಿಲ್ಲ. ಮುಖ್ಯಮಂತ್ರಿಗಳೇ ಉದ್ಘಾಟನೆ ಮಾಡುತ್ತಿರುವುದು ಉತ್ತಮ. ಏಕೆಂದರೆ, ಆ ನೆಪದಲ್ಲಾದರೂ ವಿಜ್ಞಾನದ ಆವಿಷ್ಕಾರಗಳು ಮತ್ತು ಅವುಗಳನ್ನು ಸರ್ಕಾರವೊಂದು ಹೇಗೆ ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದು ಅವರಿಗೆ ಅರಿವಾದರೆ ಸಾಕು.

ಉತ್ತಮ ಬ್ಲಾಗ್. ಇದೇ ಮೊದಲ ಬಾರಿ ನನ್ನ ಗಮನಕ್ಕೆ ಬಂದಿದೆ. :)

MY SOUL IS MATHEMATICS ಹೇಳಿದರು...

ತಮ್ಮ ಇ-ಜ್ಞಾನ ಬ್ಲಾಗ್ ಇವತ್ತಷ್ಟೆ ನೋಡಿದೆ. ಬಹಳ ಜನಕ್ಕೆ ಈ ಬ್ಲಾಗ ಇನ್ನೂ ಪರಿಚಯವಾಗಿಲ್ಲ. ವಿಜ್ಞಾನಕ್ಕೆ ಸಂಬಂದಪಟ್ಟಂತೆ ತುಂಬಾ ಉತ್ತಮ ಬರಹಗಳು, ಮೂಡಿ ಬಂದಿವೆ. ತುಂಬಾ ಶ್ರಮ ಪಟ್ಟಿದ್ದೀರಿ. ನಾನು ನನ್ನ ಸ್ಹೇಹಿತರಿಗೆ ನಿಮ್ಮ ಬ್ಲಾಗಿನ ವಿಳಾಸ ಪಾರ‍್ವಾರ್ಡ ಮಾಡಿದ್ದೇನೆ. ಮಾಹಿತಿಪೂರ್ಣ ಲೇಖನಗಳು ಇದರಲ್ಲಿವೆ. ತಮಗೆ ತುಂಬಾ ಧನ್ಯವಾದಗಳು. ಇನ್ನೂ ಉತ್ತಮ ಲೇಖನಗಳು ಹೊರಬರಲಿ
ನಾನು ಈಗ ನಿಮ್ಮ ಬ್ಲಾಗನ್ನು ದಿವಸವೂ ಓದುವ ಓದುಗನಾಗುತ್ತೇನೆ.
ಅಂದಹಾಗೆ ನುಡಿ ಅಥವಾ ಬರಹ ಫಾಂಟ್‌ನಲ್ಲಿದ್ದ ವಿಷಯವನ್ನು ಯಥವತ್ತಾಗಿ ಯೂನಿಕೋಡ್‌ಗೆ ಬದಲಾಯಿಸುವ ವಿಧಾನ ಹೇಗೆ ಗೊತ್ತಿದ್ದರೆ ತಿಳಿಸಿ. ನಾನು ತುಂಬಾ ಆಭಾರಿಯಾಗುತ್ತೇನೆ.

badge