ಮಂಗಳವಾರ, ಮಾರ್ಚ್ 10, 2009

ಇಂಟರ್‌ನೆಟ್ - 'ಅಂತರ್ಜಾಲ' ಸರಿಯೋ 'ಅಂತರಜಾಲ' ಸರಿಯೋ?

ಪ್ರೊ. ಜಿ. ವೆಂಕಟಸುಬ್ಬಯ್ಯನವರ ನಿಘಂಟಿನಿಂದ ಹೆಕ್ಕಿದ ಈ ಶಬ್ದಾರ್ಥಗಳನ್ನು ನೋಡಿ:

inter-city (ಗು) ಅಂತರ ನಗರ
inter collegiate (ಗು) ಅಂತರ ಕಾಲೇಜು, ಅನೇಕ ಕಾಲೇಜುಗಳ ನಡುವಣ
interprovincial (ಗು) ಅಂತರ ಪ್ರಾಂತೀಯ
interstate (ಗು) ಅಂತರ ರಾಜ್ಯದ, ರಾಜ್ಯಗಳ ನಡುವೆ ನಡೆಯುವ

ಇಂಟರ್ ಅಂದರೆ 'ಅಂತರ', "ಹೊರಗಿನದ್ದು" ಅಂದರೂ ಅನ್ನಬಹುದು ಅಲ್ವಾ?

ಸರಿ ಹಾಗಿದ್ರೆ, ಈಗ ಇಂಟ್ರಾ ಅಥವಾ 'ಅಂತರ್' ಅಂದರೆ ಏನು ನೋಡೋಣ ಬನ್ನಿ:

intra (ಸಪೂಪ) ಒಳಗೆ, ಒಳಗಡೆ, ಅಂತಃ, ಒಳಭಾಗದಲ್ಲಿ ಎಂಬರ್ಥ ಕೊಡುವ ಪದ
ಅಂತರ್ (ಸಂ) (ಅ) ಒಳಗಿನ

ಇದನ್ನೆಲ್ಲಾ ಯಾಕೆ ಹೇಳ್ತಿದೀನಿ ಅಂದ್ರೆ...

ನಾವು ಇಂಟರ್‌ನೆಟ್ ಅನ್ನು ಅಂತರ್ಜಾಲ ಎಂದೇ ಬರೆಯುತ್ತಿದ್ದೇವೆ.

ಅಂತರ್ಜಾಲ (ಅಂತರ್-ಜಾಲ) ಎಂದರೆ ಇಂಟ್ರಾ-ನೆಟ್: ಒಂದು ಸಂಸ್ಥೆ ಅಥವಾ ವ್ಯಕ್ತಿಯ ಒಡೆತನಕ್ಕೆ ಒಳಪಟ್ಟಿರುವ ಖಾಸಗಿ ಜಾಲ, ನಿರ್ದಿಷ್ಟ ಹಾಗೂ ಸೀಮಿತ ವ್ಯಾಪ್ತಿಯ 'ಒಳಗೆ' ಮಾತ್ರ ಅಸ್ತಿತ್ವದಲ್ಲಿರುವುದು. ವಿಕಿಪೀಡಿಯಾ ಪ್ರಕಾರ ಹೇಳುವುದಾದರೆ 'An intranet is a private computer network that uses Internet technologies to securely share any part of an organization's information or operational systems with its employees.'

ಆದರೆ ಇಂಟರ್‌ನೆಟ್ ಖಾಸಗಿ ಸ್ವತ್ತಲ್ಲವಲ್ಲ! ಗಣಕ-ಗಣಕಗಳ, ಜಾಲ-ಜಾಲಗಳ, ದೇಶ-ದೇಶಗಳ ನಡುವೆ ಸಂಪರ್ಕ ಕಲ್ಪಿಸುವ ಮಹಾಜಾಲ ಅದು.

ಹೀಗಾಗಿ ಇಂಟರ್‌ನೆಟ್‌ಗೆ 'ಅಂತರಜಾಲ' ಸರಿಯಾದ ಸಮಾನಾರ್ಥಕ, ಅಲ್ಲವೆ?

ನೀವೇನಂತೀರಿ? ಕಮೆಂಟಿಸಿ!!

8 ಕಾಮೆಂಟ್‌ಗಳು:

Keshav.Kulkarni ಹೇಳಿದರು...

ನನ್ನ ಪ್ರಕಾರ ಇಂಗ್ಲೀಷಿನಲ್ಲಿರುವುದನ್ನು ಪೂರ್ತಿ ಅನುವಾದ ಮಾಡುವ ಅಗತ್ಯವಿಲ್ಲ. internetಗೆ ಜಾಲ ಅಥವಾ ಬಲೆ ಅಂದರೆ ಸಾಕು.

Srinidhi ಹೇಳಿದರು...

ಕೇಶವ ಕುಲಕರ್ಣಿ ಅವರಿಗೆ ನಮಸ್ಕಾರ. ಕಮೆಂಟಿಸಿದ್ದಕ್ಕೆ ಧನ್ಯವಾದಗಳು.

"ಇಂಗ್ಲೀಷಿನಲ್ಲಿರುವುದನ್ನು ಪೂರ್ತಿ ಅನುವಾದ ಮಾಡುವ ಅಗತ್ಯವಿಲ್ಲ" ಎಂಬ ನಿಮ್ಮ ವಾದವನ್ನು ಒಪ್ಪುತ್ತೇನೆ. ಆದರೆ ಅಂತರ್ಜಾಲ/ಅಂತರಜಾಲ ಎಂಬ ಹೆಸರು ಈಗಾಗಲೇ ಬಹಳ ವ್ಯಾಪಕವಾದ ಬಳಕೆಯಲ್ಲಿರುವುದರಿಂದ ಇದನ್ನು ಬದಲಿಸುವುದು ಕಷ್ಟವಾಗಬಹುದು.

ಬಲೆ ಎಂಬ ಪ್ರಯೋಗ ನನಗೆ ಹೊಸದು. ಆದರೆ 'ಜಾಲ' ಸಾಮಾನ್ಯವಾಗಿ ನೆಟ್ವರ್ಕ್ ಅನ್ನು ಸೂಚಿಸಲು ಬಳಕೆಯಾಗುತ್ತದೆ.

Dr U B Pavanaja ಹೇಳಿದರು...

ಅಂತರಜಾಲ ಅನ್ನುವುದೇ ಸರಿ. ನಾನು ನನ್ನ ಎಲ್ಲಾ ಲೇಖನಗಳಲ್ಲೂ ಹಾಗೆಯೇ ಬಳಸಿದ್ದೇನೆ. ದುರಾದೃಷ್ಟಕ್ಕೆ ಬಹುತೇಕ ಪತ್ರಿಕಾ ಸಂಪಾದಕರು ಅದನ್ನು ಅಂತರ್ಜಾಲ ಎಂದು ತಿದ್ದಿ ಪ್ರಕಟಿಸಿದ್ದಾರೆ. website ಅನ್ನುವದಕ್ಕೆ ಅಂತರಜಾಲ ತಾಣ ಎನ್ನುವದೇ ಸರಿಯಾದರೂ ಚುಟುಕಾಗಿ ಜಾಲತಾಣ ಎಂದು ಬರೆದರೆ ತಪ್ಪಿಲ್ಲ.

-ಪವನಜ

ಪಂಡಿತಾರಾಧ್ಯ ಹೇಳಿದರು...

mAnyare,
aMtara jAla ennuvudannu
BASheya bagge arivilladavaru iMgliShina inter net ennuvudannu kuruDAgi anukarisi tappAgi aMtarjAa(!) eMdu baredare adu aBiprAyada viShayavAgabAradu. sariyAda rUpavannu mAtra baLasabEku.

aMtra kAlEju kabaDDi paMdya ennuva udAharaNegaLu bEkAdaXhTive.

paNDItArAdhya
kuveMpu kannaDa adhyayana saMsthe
mAnasagaMgOtri
maisUru 570 006

ಪಂಡಿತಾರಾಧ್ಯ ಹೇಳಿದರು...

mAnyare,
aMtara jAla ennuvudannu
BASheya bagge arivilladavaru iMgliShina inter net ennuvudannu kuruDAgi anukarisi tappAgi aMtarjAa(!) eMdu baredare adu aBiprAyada viShayavAgabAradu. sariyAda rUpavannu mAtra baLasabEku.

aMtra kAlEju kabaDDi paMdya ennuva udAharaNegaLu bEkAdaXhTive.

paNDItArAdhya
kuveMpu kannaDa adhyayana saMsthe
mAnasagaMgOtri
maisUru 570 006

Srinidhi ಹೇಳಿದರು...

ಕಮೆಂಟಿಸಿದ್ದಕ್ಕಾಗಿ ಡಾ|ಪಂಡಿತಾರಾಧ್ಯರಿಗೆ ಧನ್ಯವಾದಗಳು.

ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ಅಶೋಕ್ ಕುಮಾರ್‌ರವರು ಉದಯವಾಣಿಯ ತಮ್ಮ ಅಂಕಣದಲ್ಲಿ ನನ್ನ ಪ್ರಶ್ನೆಯನ್ನು ಪ್ರಸ್ತಾಪಿಸಿದ್ದಾರೆ: http://www.udayavani.com/showstory.asp?news=1&contentid=630824&lang=2

ಅಂದಹಾಗೆ ಶ್ರೀ ಅಶೋಕ್‌ರವರ ಅಭಿಪ್ರಾಯ ಇಲ್ಲಿದೆ:
"ಅಂತರ್ಜಾತಿ (ಅಂತರ ಜಾತಿ) ಬರೆದ ಹಾಗೆ ಅಂತರ್ಜಾಲ ಎನ್ನೋದು ಸರಿ. intra net ಅಂತ:ಜಾಲ? - ಅಶೋಕ್"

Unknown ಹೇಳಿದರು...

ನಮ್ಮ ಕನ್ನಡ ಭಾಷಾ ಜಾಯಾಮನದಲ್ಲಿ ಎರಡು ಪದಗಳು ಕೂಡಿ ಸಂಧಿಕಾರ್ಯ ನಡೆಯುವುದು ಸಾಮಾನ್ಯ ಪ್ರಕ್ರಿಯೆ. ಅಂತರಜಾಲ ಉಚ್ಛಾರಣಾ ಸೌಲಭ್ಯದ ದೃಷ್ಟಿಯಿಂದ ಅಂತರ್ಜಾಲವಾಗಿದೆ. ಇಂಟರ್ ನ್ಯಾಷನಲ್ ಎಂಬುದನ್ನು ಅಂತರ ರಾಷ್ಟ್ರೀಯ ಎಂದು ಬಳಸಬೇಕು. ಆದರೆ ಅದನ್ನು ಹೆಚ್ಚಿನವರು ಅಂತರಾಷ್ಟ್ರೀಯ ಎಂದೇ ಬರೆಯುತ್ತಾರೆ.ಇದು ದೋಷವಲ್ಲ.

Srinidhi ಹೇಳಿದರು...

ಇದು ಶ್ರೀ ಎ. ಸತ್ಯನಾರಾಯಣ ಅವರ ಅಭಿಪ್ರಾಯ:

"ನನ್ನ ಉತ್ತರ ಅಂತರಜಾಲ ಅನ್ನುವುದೇ ಸರಿ; ಅಂತರ್ಜಾಲ ಎನ್ನುವುದು ತಪ್ಪು. ಇಂಟ್ರಾನೆಟ್ ಅನ್ನುವುದಕ್ಕೆ ಕನ್ನಡದಲ್ಲಿ ಸೂಕ್ತ ಮತ್ತು ಸರಿಯಾದ ಪದ ಎಂದರೆ `ಆಂತರಿಕ ಜಾಲ'"

badge